ಶುಭೋದಯಗಳು
ನನ್ನ ಹೆಸರು ನಿಶ್ಚಲ್ ವ್ಹಿ ಬಾರ್ಕಿ
ವೆದಿಕೆಯ ಮೇಲೆ ಆಸೀನರಾಗಿರುವ ಗುರು - ಹಿರಿಯರಿಗೆ ನಮಿಸುತ್ತಾ, ನಿಮ್ಮೆಲ್ಲರಿಗೂ 66 ನೇ ವರ್ಷದ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.
“ಉದಯವಾಗಲಿ ನಮ್ಮ ಚಲುವ ಕನ್ನಡ - ನಾಡು”
“ಎದೆಯ ಬಗೆದರೂ ಇರಲಿ ಕನ್ನಡ,
ಹೃದಯ ಬಡಿದರೂ ಬರಲಿ ಕನ್ನಡ.
ಗರ್ವದಿಂದ ಹೇಳು ನನ್ನ ಭಾಷೆ ಕನ್ನಡ,
ಹೆಮ್ಮೆಯಿಂದ ಹೇಳು ನಾನು ಕನ್ನಡಿಗನೆಂದು”
ನಮ್ಮ ಕರ್ನಾಟಕದ ಹೆಸರು “ಮಹಾಭಾರತದ” ಕಾಲದಿಂದಲೂ ಇಂದಿನವರೆಗೆ ತನ್ನದೇ ಆದ ವಿಶೇಷತೆಗಳಿಂದ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ.
“ಕಮ್ಮಿತ್ತು” ನಾಡು ಎಂದರೆ ಶ್ರೀಗಂಧದ ಕಂಪನ್ನುಳ್ಳ ನಾಡು. ಅದುವೇ ನಮ್ಮ ಕರ್ನಾಟಕ.
ಮೌರ್ಯರು, ಕದಂಬರು, ಚೋಳರು, ಗಂಗರು, ಚಾಳುಕ್ಯರು, ರಾಷ್ಟ್ರಕೂಟರು, ಹೋಯ್ಸಳರು ವಿಜಯನಗರದ ಅರಸರು, ಮೈಸೂರು ಅರಸರು, ಇನ್ನೂ ಅನೇಕ ರಾಜಮನೆತನಗಳ ರಾಜಮಹಾರಾಜರು ಆಳಿದ್ದಾರೆ, ಆ ಮೂಲಕ ರಾಜ್ಯದ ನಾಡು - ನುಡಿಗೆ ಮತ್ತು ಏಳಿಗೆಗೆ ಶ್ರಮಿಸಿದ್ದಾರೆ.
ಕನ್ನಡ ಬರಹದ ಮಾದರಿಗಳಿಗೆ “ಎರಡು ಸಾವಿರದ ಐದನೂರು ವರ್ಷಗಳ” ಚರಿತ್ರೆಯಿದೆ, ವಿನೋಭ ಭಾವೆಯವರು ಕನ್ನಡದ ಲಿಪಿಯನ್ನು “ಲಿಪಿಗಳ ರಾಣಿ” ಎಂದು ಹೊಗಳಿದ್ದಾರೆ.
ಐದನೇ ಶತಮಾನದ “ಹಲ್ಮಿಡಿ” ಶಾಸನ ನಮ್ಮ ಮೊದಲೇನೆಯ ಶಾಸನವಾಗಿದೆ,
ಕನ್ನಡ ಭಾಷೆಯ ಚಳುವಳಿಯಲ್ಲಿ ಭಾಗವಹಿಸಿದ ಅನಕೃ, ಕುವೆಂಪು, ಕೆ ಶಿವರಾಂ ಕಾರಂತ್, ಬಿ ಎನ್ ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಹೆಚ್ ಎನ್ ದೊರೆಸ್ವಾಮಿ, ಕೆಂಗಲ್ ಹನುಮಂತಯ್ಯ, ಗೋರೂರು ರಮಾಸ್ವಾಮಿ ಅಯ್ಯಂಗಾರ್, ಮತ್ತು ಕೆ ಎನ್ ಕೃಷ್ಣರಾವ್ ಆದರಲ್ಲಿ ಮುಖ್ಯವಾಗಿ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯನ್ನು “1905 ರಲ್ಲಿ” ಆರಂಭಿಸಿದರು.
ಇದರ ಫಲವಾಗಿ ಎಲ್ಲಾ ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ಒಗ್ಗೂಡಿಸಿ “1956 ನವೆಂಬರ್ 1” ರಿಂದ ಮೈಸೂರು ರಾಜ್ಯ ಎಂಬ ಹೆಸರಿನಲ್ಲಿ ಇಂದಿನ ನಮ್ಮ ಕನ್ನಡ ನಾಡು ಉದಯವಾಯಿತು.
ತದನಂತರ ದೇವರಾಜ್ ಅರಸು ರವರ ಕಾಲದಲ್ಲಿ ಮೈಸೂರು ರಾಜ್ಯವನ್ನು “1973 ನವೆಂಬರ್ 1” ರಂದು ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಲಾಯಿತು.
ಪ್ರತಿ ಕನ್ನಡಿಗರ ಹೆಮ್ಮೆಯ ದಿನವೆಂದರೆ “ಕನ್ನಡರಾಜ್ಯೋತ್ಸವದ” ಆಚರಣೆಯ ದಿನ. “8 ಜ್ಞಾನಪೀಠ” ಪ್ರಶಸ್ತಿಗಳನ್ನು ಪಡೆದ ಕೀರ್ತಿ ನಮ್ಮ ಕನ್ನಡ ಭಾಷೆಯದ್ದು.
ಎಲ್ಲಾದರೂ ಇರು, ಎಂತಾದರೂ ಇರು, ಏಂದೆಂದಿಗೂ ನೀ ಕನ್ನಡವಾಗಿರು.
ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.
ಎಂದು ಹೇಳುತ್ತಾ ನನ್ನ ಕನ್ನಡದ ತೊದಲು ನುಡಿಗಳನ್ನು ಮುಗಿಸುತ್ತಿದ್ದೇನೆ.
ಜೈ ಹಿಂದ್
ಜೈ ಕರ್ನಾಟಕ.
0 Comments:
Post a Comment